Shatavadhani R Ganesh on Mankuthimmana Kagga

ಕಗ್ಗದ ಮಾತುಗಳು ನೊಂದ ಮನಸ್ಸಿಗೆ ನೇಹಿಗರಾಗುತ್ತವೆ,
ಬೆಂದ ಜೀವಕ್ಕೆ ತಂಪೆರೆಯುತ್ತವೆ,
ಧೃತಿಗೆಟ್ಟವರಿಗೆ ಗತಿಯಾಗುತ್ತವೆ,
ಮತಿಭ್ರಾಂತರಿಗೆ ಪಥವಾಗುತ್ತವೆ, ಪಥ್ಯವೂ ಆಗುತ್ತವೆ. ಮಾತ್ರವಲ್ಲ,
ಉಲ್ಲಾಸದಲ್ಲಿದ್ದವರಿಗೆ ಅಂತಮುಖತೆಯನ್ನು ಕಲ್ಪಿಸುತ್ತವೆ,
ಸಾಧನೆಯ ಶಿಖರದಲ್ಲಿದ್ದವರಿಗೆ ನಮ್ರತೆಯನ್ನು ಕಲಿಸುತ್ತವೆ,
ಆತ್ಮವಿಶ್ವಾಸಿಗಳಿಗೆ ಅಂಗೀಕಾರಬುದ್ಧಿಯನ್ನು ತುಂಬುತ್ತವೆ.

ಹೆಚ್ಚೇನು, ಕಗ್ಗವೊಂದು ಪುಷ್ಪಕವಿಮಾನದಂತೆ:
ಯಾವುದೇ ಬಗೆಯ ಮನಸ್ಸಿನವರಿಗೂ ಅಲ್ಲಿ ಅವಕಾಶವುಂಟು;
ಅಂತೆಯೇ ಕಗ್ಗದ ರಸಿಕರ ಮನಸ್ಸುಗಳೂ ಪುಷ್ಪಕವಿಮಾನದಂತೆ:
ಕಗ್ಗವನ್ನು ಕುರಿತ ಯಾವುದೇ ವಿಚಾರಧಾರೆಗೆ ಅವರಲ್ಲಿ ಎಡೆಯುಂಟು.

ಹೀಗೆ ಉಭಯಥಾ ಅದೊಂದು ವ್ಯೋಮಯಾತ್ರೆ.
ನೆಲವನ್ನು ಮರೆಯದ, ಮುಗಿಲಿನಲ್ಲಿ ಮರೆಯಾಗದ ಆನಂದಯಾತ್ರೆ

ಶತಾವಧಾನಿ ಗಣೇಶ್ ಅವರು ಡಿ.ವಿ.ಜಿ. ಮತ್ತು ಮಂಕುತಿಮ್ಮನಕಗ್ಗದ ಬಗ್ಗೆ ಹಲವಾರು ಪುಸ್ತಕಗಳನ್ನು ಸಂಪಾದಿಸಿ ಮತ್ತು ಅನೇಕ ವಿಚಾರ ಗೋಷ್ಠಿಗಳನ್ನು ನಡಿಸಿಕೊಟ್ಟಿದರೆ ಮತ್ತು ದಿನನಿತ್ಯವೂ ಅದರ ಅನುಕರಣೆ ಮತ್ತು ಪ್ರಚಾರ ಕಾರ್ಯದಲ್ಲಿ ಸಕ್ರಿಯ. ಮಾನ್ಯರಿಗೆ ನಮ್ಮ ಕಡೆ ಇಂದ ಒಂದ ನಮನ.

Shatavadani R Ganesh is one of the great admirers of DVG and Mankuthimmana Kagga , he has authored various books and conducted various events where he brings various dimensions and works of DVG to common people.

Recommendations

  1. Detailed article written by Shatavadani R Ganesh for Vijayavani on 16 Aug 2018 to mark 75 years of Mankuthimmana Kagga.
    To read full article click here

 

Leave a comment