Vanasuma – Kannada Poem

ವನಸುಮದೊಲೆನ್ನ ಜೀವನವು ವಿಕಸಿಸುವಂತೆ
ಮನವನನುಗೊಳಿಸೋ | ಗುರುವೆ ಹೇ ದೇವ !

ಜಗಕೆ ಸಂತಸವೀವ ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ

ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು ನಿಜ
ಸೌರಭವ ಸೂಸಿ ನಲವಿಂ
ತಾನೆಲೆಯ ಪಿಂತಿರ್ದು ದೀನತೆಯ ತೋರಿ ಅಭಿ
ಮಾನವನು ತೊರೆದು ಕೃತಕೃತ್ಯತೆಯಿನೆಸೆವಂತೆ

ಉಪಕಾರಿ ನಾನು ಎನ್ನುಪಕೃತಿಯು ಜಗಕೆಂಬ
ವಿಪರೀತ ಮತಿಯನುಳಿದು
ವಿಪುಲಾಶ್ರಯವನೀವ ಸುಫಲಸುಮಭರಿತ ಪಾ-
ದಪದಂತೆ ನೈಜಮಾದೊಳ್ಪಿನಿಂ ಬಾಲ್ವವೊಳು

  • One of the early works of DVG which brought him lot of fame and name is this poem “Vanasuma”
  • This poem was used as prayer in many institutions
  • Essence or theme of the poem is to “Praying God to direct us to lead selfless life similar to that of a wild flower”
  • Lots of musicians have tried different ragas for the poem and the poem has achieved cult status in ‘Kannada Poetry World’
  • If you can translate the poem in different languages, please share the work with us and we can feature the same with due credits.

One comment

Leave a comment