ಡಿ.ವಿ.ಜಿ. ಎಂಬ ಹೆಸರಿನಿಂದಲೇ ಚಿರಪರಿಚಿತರಾಗಿರುವ ಡಾ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ೧೮೮೭ರ ಮಾರ್ಚ್ ತಿಂಗಳ ೧೭ ರಂದು ಕರ್ನಾಟಕ ರಾಜ್ಯದ ಕೋಲಾರ ತಾಲೂಕಿನ ಮುಳಬಾಗಿಲನಲ್ಲಿ ಜನಿಸಿದರು.
ತಮ್ಮ ಜೀವಿತಾವಧಿಯಲ್ಲಿ ಪತ್ರಕರ್ತ,ಸಂಪಾದಕ,ವ್ಯಕ್ತಿ ಜೀವನಚರಿತ್ರೆಕಾರ,ಕವಿ, ಮೇಧಾವಿ,ಸಾಹಿತಿ ಹೀಗೆ ಹತ್ತು ಹಲವು ರಂಗಗಲ್ಲಿ ದುಡಿಮೆ ಮಾಡಿದವರಾದರು ಆಂತರ್ಯದಿಂದ ವಿನಮ್ರತೆ ಕೂಡಿರುವ ಒಬ್ಬ ನಿಷ್ಟಾವಂತರಾಗಿ ಬಾಳಿ ಎಲ್ಲ ಪೀಳಿಗೆಯವರಿಗೂ ಮಾದರಿ ವ್ಯಕ್ತಿಯಾಗಿದ್ದಾರೆ.
ಡಿವಿಜಿಯವರ ಸಾಮಾನ್ಯ ಶಿಕ್ಷಣ ಪ್ರೌಢಶಾಲೆಯಲ್ಲೇ ನಿಂತರೂ, ವೇದಗಳ ಅಧ್ಯಯನ ಮಾಡಿದ್ದರು, ಕನ್ನಡ, ಇಂಗ್ಲಿಷ್, ಸಂಸ್ಕೃತ ಹಾಗು ತೆಲುಗು ಭಾಷೆಯ ಅನೇಕ ಶ್ರೇಷ್ಠ ಕೃತಿಗಳನ್ನು ಓದಿದ್ದರು. ಸ್ವಾಮಿ ವಿವೇಕಾನಂದರು[F1] ಹಾಗು ಹಲವು ಸ್ವಾತಂತ್ರಹೋರಾಟಗಾರರ ಭಾಷಣಗಳು ಇವರ ಮೇಲೆ ಪ್ರಭಾವಬೀರಿತ್ತು. ಮುಖ್ಯವಾಗಿ ಗೋಖಲೆಯವರ[F2] ವಿಚಾರಧಾರೆ ಮತ್ತು ವ್ಯಕ್ತಿತ್ವ ಅವರಲ್ಲಿ ಪೂಜ್ಯ ಭಾವನೆ ಮೂಡಿಸಿತ್ತು.
- ೧೯೦೭ ರಿಂದ ಹಲವಾರು ಪುರವಾಣಿಗಳು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯಲು ಶುರು ಮಾಡಿದವರು ಡಿ.ವಿ.ಜಿ. ೧೯೦೭ರಲ್ಲಿ ಮೈಸೂರ್ ನ್ಯೂಸ್ಪಪೆರ್ ರೇಗುಲೇಷನ್ ಆಕ್ಟ್ ವಿರುದ್ಧ ‘ದಿ ಪ್ರೆಸ್ ಗ್ಯಾಗ್’ ಎಂಬ ಲೇಖನಗಳ ಕ್ರೂಡೀಕರಿಸಿದರು.
- ಅವರು ‘ದಿ ಕರ್ನಾಟಕ’, ‘ದಿ ಇಂಡಿಯನ್ ರಿವ್ಯೂ ಆಫ್ ರಿವ್ಯೂಸ್’ , ‘ಪಬ್ಲಿಕ್ ಅಫ್ಫೇರ್ಸ್’ ಗೋಖಲೆ ಸಂಸ್ಥೆಯ ಪತ್ರಿಕೆಯನ್ನು ಶುರುಮಾಡಿದರು. ‘ಕರ್ನಾಟಕ ಜನ ಜೀವನ ಮತ್ತು ಅರ್ಥಸಾಧಕ ಪತ್ರಿಕೆ’ ಮತ್ತು ಕರ್ನಾಟಕ ಸಾಹಿತ್ಯ ಪರಿಷತ್ತಿನ ಪತ್ರಿಕೆಗಳನ್ನು ಒಂದು ಹಂತಕ್ಕೆ ತಂದು ಸ್ಥಿರವಾಗಿಸಿದ ಪ್ರಮುಖರು ಡಿ.ವಿ.ಜಿ.
- ಅವರು ‘ದಿ ಕರ್ನಾಟಕ’, ‘ದಿ ಇಂಡಿಯನ್ ರಿವ್ಯೂ ಆಫ್ ರಿವ್ಯೂಸ್’ , ‘ಪಬ್ಲಿಕ್ ಅಫ್ಫೇರ್ಸ್’ ಗೋಖಲೆ ಸಂಸ್ಥೆಯ ಪತ್ರಿಕೆಯನ್ನು ಶುರುಮಾಡಿದರು. ‘ಕರ್ನಾಟಕ ಜನ ಜೀವನ ಮತ್ತು ಅರ್ಥಸಾಧಕ ಪತ್ರಿಕೆ’ ಮತ್ತು ಕರ್ನಾಟಕ ಸಾಹಿತ್ಯ ಪರಿಷತ್ತಿನ ಪತ್ರಿಕೆ[F3]ಗಳನ್ನು ಒಂದು ಹಂತಕ್ಕೆ ತಂದು ಸ್ಥಿರವಾಗಿಸಿದ ಪ್ರಮುಖರು ಡಿ.ವಿ.ಜಿ.
- ೧೯೧೨ರಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರ ಪರಿಚಯ ಮತ್ತು ಬೆಂಗಳೂರು ಪುರಸಭೆಗೆ ಆಯ್ಕೆ.
- ಆಗಿನ ಪ್ರಾದೇಶಿಕ ರಾಜ ರಾಜ್ಯಗಳ ಸಮಸ್ಯೆಗಳ ಕುರಿತು ಹಲವು ವಿಷಯಗಳನ್ನು ಮಂಡಿಸಿದ್ದಾರೆ. ೧೯೩೯ರಲ್ಲಿ ಸಂವಿದಾನ ಸುಧಾರಣಾ ಸಮಿತಿ ಸಧಸ್ಯರಾಗಿ ಮತ್ತು ೧೯೨೬ರಿಂದ ೧೯೪೦ರವರೆಗೆ ಮೈಸೂರು ಪುರಸಭೆಯ ಸದಸ್ಯರಾಗಿದ್ದರು.
ಕನ್ನಡದ ಅತ್ಯದ್ಭುತ ಸಾಹಿತಿಗಳಲ್ಲಿ ಒಬ್ಬರಾದ ಡಿ.ವಿ.ಜಿ. ಕೃತಿಗಳಲ್ಲಿ ಮೇರು ಸಾಹಿತ್ಯವಾಗಿ ನಿಲ್ಲುವುದು “ಅಂತಃಪುರ ಗೀತೆ”[F4], ಮನನಕಾವ್ಯವಾಗಿ “ಮಂಕುತಿಮ್ಮನ ಕಗ್ಗ”[F5], ಅನೇಕ ಜೀವನಚರಿತ್ರೆಗಳು, ಶೇಕ್ಸಪೀಯರ್ ಅವರ ‘ಮ್ಯಾಕ್ ಬೆತ್’ ಹಾಗು ಟೆನ್ನಿಸೊನ್ ಅವರ “ದಿ ಕಪ್” ಅನುವಾದಗಳು, ರಾಜಕೀಯ,ಧರ್ಮ ಮತ್ತು ಸಂಸ್ಕೃತಿ ಕುರಿತು ಬರೆದಿರುವ ಹಲವಾರು ಪ್ರಭಂದಗಳು ಮೊದಲು ಬರುತ್ತದೆ.
ಡಿ.ವಿ.ಜಿ. ಅವರು ೮೦೦೦ಕ್ಕೂ ಅಧಿಕ ಪುಟಗಳಷ್ಟು ೫೦ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.
- ಅವರು ಅತ್ಯದ್ಭುತ ‘ಮಂಕುತಿಮ್ಮ ಕಗ್ಗ’ ದಿನನಿತ್ಯ ಒಂದಲ್ಲೊಂದು ಕಡೆ ಪ್ರಸ್ತಾಪಿಸಲ್ಪಡುವ ಕೃತಿಯಾಗಿ ಅಮರವಾಗಿ ಉಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ.
- ಭಗವದ್ಗೀತೆಯ[F6] ಬಗ್ಗೆ ಡಿವಿಜಿಯವರ ಪ್ರವಚನ ಮಾಲಿಕೆಯು ಪುಸ್ತಕ ರೂಪದಲ್ಲಿ ‘ಗೀತಾ ತಾತ್ಪರ್ಯ’ ಅಥವಾ ‘ಜೀವನಧರ್ಮ ಯೋಗ'[F7] ವೆಂದೇ ಪ್ರಸಿದ್ದಿ ಪಡೆದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು[F8] ೧೯೬೭ರಲ್ಲಿ ತನ್ನದಾಗಿಸಿ ಕೊಂಡಿತು.
- ಶ್ರೇಷ್ಟ ಪದ್ಯಗಲ್ಲಿ ಒಂದಾದ ‘ಪಂಪ ಭಾರತ’ ಮತ್ತು ಇಂಗ್ಲಿಷ್-ಕನ್ನಡ ನಿಗಂಟುವಿನ ಸಂಪಾದಕರಲ್ಲಿ ಒಬ್ಬರಾಗಿದ್ದರು.ಅವರು ಸಂಸ್ಕೃತಿದ ವಿದ್ವಾಂಸರು ಆಗಿದ್ದವರು.
- ೧೯೧೫ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಲ್ಲಿ ಸಹಕರಿಸಿ ಮುಂದೆ ಅದರ ಉಪಾಧ್ಯಕ್ಷರಾಗಿ ಸಂಸ್ಥೆಯಲ್ಲಿ ಹಲವಾರು ಯೋಜನೆಗಳನ್ನು ಕೈಗೊಳ್ಳುವ ಮೂಲಕ ಅದರ ಘನತೆಯನ್ನು ಇನ್ನು ಹೆಚ್ಚು ಮಾಡಿದರು.
- ತದನಂತರ ತಾವು ಗೋಖಲೆ ಸೇವಾ ಸಂಸ್ಥೆ,ಮೈಸೂರು ರಾಜ್ಯ ಪತ್ರಕರ್ತರ ಸಂಘ, ಶಾರ್ಟ್ ಹ್ಯಾಂಡ್ ಬರೆಯುವರ ಬಳಗ ,ಆತ್ಮರಕ್ಷಣೆ ತಂಡ ಮತ್ತು ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫ್ಫೇರ್ಸ್[F9] ಅನ್ನು ಸ್ಥಾಪಿಸಿದರು.
ಇವರ ಎಲ್ಲಾ ಸಾಧನೆಗಳನ್ನು ಮನಗೊಂಡು ಮೈಸೂರು ವಿಶ್ವವಿದ್ಯಾಲಯ ಇವರಿಗೆ ಗೌರವ ದಿ ಲಿಟ್ [F10] ಪದವಿಯನ್ನು೧೯೬೧ರಲ್ಲಿ ನೀಡಿತು. ೧೯೭೪ರಲ್ಲಿ ಭಾರತ ಸರ್ಕಾರ ದೇಶದ ಶ್ರೇಷ್ಟ ಪ್ರಶಸ್ತಿಗಳಲ್ಲಿ ಒಂದಾದ ‘ಪದ್ಮಭೂಷಣ’ವನ್ನು[F11] ನೀಡಿ ಗೌರವಿಸಿತು.
ಡಿ.ವಿ.ಜಿ. ತಮ್ಮ ಜೀವಿತಾವಧಿಯಲ್ಲಿ ಅನೇಕಾನೇಕ ಮಹಾನಿಯಾರೊಂದಿಗೆ ಕೆಲಸ ಮಾಡಿದರು ಕೂಡ ಒಮ್ಮೆಯೂ ಕೂಡ ತಮ್ಮ ಸ್ವಂತದ ಕೆಲಸಗಳಿಗೆ ಅವರ ಸಹಾಯ ಅಥವಾ ಹೆಸರನ್ನು ಬಳಿಸಲಿಲ್ಲ, ತಮ್ಮ ಎಲ್ಲಾ ಸಹಾಯ ಕಾರ್ಯಗಳಿಗೆ ಎಂದು ದುಡ್ಡು ಪಡೆದವರಲ್ಲ,ಇವರಿಗಾಗಿ ಸಾರ್ವಜನಿಕವಾಗಿ ಸಂಗ್ರಹಿಸಿದ್ದ ೧,೦೦,೦೦೦ ರೂಪಾಯಿಗಳನ್ನು ಗೋಹಕಲೆ ಸಂಸ್ಥೆಗೆ ದಾನ ಮಾಡಿಬಿಟ್ಟರು,ತಮ್ಮ ಪ್ರಶಸ್ತಿಯಲ್ಲಿ ಬಂದಂತ ನಗದನ್ನು ಕೂಡ ಗೋಖಲೆ ಸಂಸ್ಥೆಗೆ ಕೊಡಿಗೆ ಮಾಡಿದವರು ಕೊನೆಗೆ ತಮ್ಮ ಎಲ್ಲಾ ಕೃತಿಗಳ ಹಕ್ಕುಗಳನ್ನೂ ಸಂಸ್ಥೆಗೆ ಬಿಟ್ಟು ಹೋದಂತ ಧೀಮಂತ ನಾಯಕ ಡಿ.ವಿ.ಜಿ.
ಅಕ್ಟೋಬರ್ ೭ ೧೯೭೫ ರಲ್ಲಿ ಪತ್ರಕರ್ತ,ಸಾಹಿತಿ.ರಾಜಯಕಿಯ ವಿಶ್ಲೇಷಕ ,ಅದ್ಭುತ ಮೇಧಾವಿ, ಗೋಖಲೆ ಸಂಸ್ಥೆಯ ಸ್ಥಾಪಕ ಡಿ.ವಿ.ಜಿ. ನಮ್ಮನೆಲ್ಲ ಅಗಲಿದರು.
ಈ ಲೇಖನದ ಮುಖ್ಯ ಉದ್ದೇಶ ಡಿ.ವಿ.ಜಿ. ಮತ್ತು ಅವರ ಕೆಲ್ಸಗಳ ಬಗ್ಗೆ ಒಂದು ಕಿರು ಪರಿಚಯ ಮಾಡಿಸುವುದಾಗಿದ್ದು, ತಾವುಗಳು ಇವರ ಮತ್ತು ಇವರ ಕೆಲಸಗಳ ಬಗ್ಗೆ ಹೆಚ್ಚು ತಿಳಿದಷ್ಟು ಎಳ್ಳಷ್ಟು ಸಂದೇಹವಿಲ್ಲದೆ ಅದರಿಂದ ಸ್ಫೂರ್ತಿ ಪಡಿಯುತ್ತಿರ.