DVG’s Poem on Mahatma Gandhi

ಸಾಧು ಗಾಂಧಿ

ಇಂದ್ರಿಯಂಗಳ ಜಯಸಿ ಚಿತ್ತಶುದ್ಧಿಯ ಬಯಸಿ
ಲೋಭಮಂ ತ್ಯಜಿಸಿ ರೋಷವ ವರ್ಜಿಸಿ |
ಸರ್ವಸಖ್ಯವ ಭಜಿಸಿ ತ್ಯಪ್ತತೆಯನಭ್ಯಸಿಸಿ
ಸತ್ಯಪಾಲನೆಯೊಂದ ಮನದೊಳಿರಿಸಿ |
ಕಾಯಕಷ್ಟವ ಸಹಿಸಿ ವೈರಿಗಣಮಂ ಕ್ಷಮಿಸಿ
ಸರ್ವಸಮಾತೆಯ ಗಳಿಸಿ ಶಮವನರಿಸಿ
ಸ್ವಾತ್ಮ ಶಿಕ್ಷಣಮೇ ಸ್ವರಾಜ್ಯಮೆನ್ನುತ ವಚಿಸಿ
ದೇಶಸೇವೆಯನೀಶಸೇವೆಯೆನಿಸಿ |
ಸಾಧುವರವೃತ್ತಿಯಂ ತನ್ನೊಳೇ ಜಗಕೆ ತೋರಿ
ಐಹಿಕಾರ್ಥಗಳಾರ್ಥ್ಯಮಂ ವಿಶದಬಡಸಿ |
ಪಾಶ್ಚಾತ್ಯ ಜನಕಮತಿ ವಿಮಲ ನೀತಿಯನು ಪೇಲ್ವಾ
ದೈವ ಸಂಪನ್ಮಾರ್ಗದರ್ಶಕಂ ಗಾಂಧಿಯಲ್ತೆ ||

Leave a comment