ಮಂಕುತಿಮ್ಮನ ಕಗ್ಗದ ಬಗ್ಗೆ ತಿಳಿದಿರುವ ನಿಮಗೆ ಅದರ ಹಿಂದಿರುವ ‘ಕಗ್ಗದ ಕಥೆ’ಯ ಬಗ್ಗೆ ಗೊತ್ತಾ ?
ಅಲ್ಲಿರುವ ಸೋದರಮಾವ ತಿಮ್ಮಗುರು ಮತ್ತು ಅಳಿಯ ಸೋಮಿಯ ಸಂಬಂಧ ಕುರುತು ತಿಳಿಯುತ್ತ ಪೂಜ್ಯ ಡಿವಿಜಿ ಯವರನ್ನ ನೆನೆಯೋಣ.
ಹಳ್ಳಿ ಮಕ್ಕಳಿಂಗೆ ಗುರುವು, ಹಳ್ಳಿಗೆಲ್ಲ ಗೆಳೆಯನು, –
“ಒಳ್ಳೆ ಹಾರುವಯ್ಯ”, “ಹಸುವು” “ಹಸುಳೆ” ಎನುವರವನನು.
ಮಂಕುತಿಮ್ಮನೆನುತ ಹೆಸರನವನು ಹೇಳಿಕೊಳುವನು;
ಬಿಂಕ ಕೊ೦ಕು ಒ೦ದು ಅರಿಯದಿದ್ದ ಸಾಧುವಾತನು.
ಬಾಳಿದೇತಕೆನುತಲೊಮ್ಮೆಯೊಮ್ಮೆ ತಾನೆ ಕೇಳ್ವನು;
ತೂಳುಹೆಣವು ತಾನೆನುತ್ತಲೊಮ್ಮೆ ನಕ್ಕು ಪೇಳ್ವನು.
ಬೆದರರಾರುವಮವನ ಕಂಡು; ಬಳಸಿ ವಿ೦ತು ಹುಡುಗರು
ಮುದದೊಳವನ ಸಲಿಗೆಯಿ೦ದ, ‘ಮೇಷ್ಟೆ/ ‘ಮೇಷ್ಟೆ’ ಎನುವರು.
ಮೂಡಲೂರ ಸುತ್ತಮುತ್ತಣೈದು ಮೈಲಿಯಿಂದಲಿ
ಕೂಡಿ ಬರುವರಣುಗರೋದೆ ತಿಮ್ಮಗುರುವಿನೆಡೆಯಲಿ.
ಶಾಲೆಗವನು ಹೊತ್ತು ಹೊತ್ತಿಗೊಪ್ಪವಂತೆ ಬರುವನು;
ವೇಳೆ ವೆರ್ತವಾಗದಂ೦ತೆ ಪಾಠ ಹೇಳುತಿರುವನು;
ಆಟ, ಅಮರ, ಮಗ್ಗಿ, ಬರಹ-ಎಲ್ಲ ಕಲಿಸಿಕೊಡುವನು;
ಏಟು, ಪೆಟ್ಟು, ಬಯ್ಲು, ಗದರು-ಒ೦ದನುಮವನರಿಯನು;
ಕತೆಯ ಹೇಳಿ ನಗಿಸುತವರ ತುಂಟತನವ ತಕಳೆವನು;
ಮಿತದಿನೆಲ್ಲರೊಡನೆ ಮಾತುಕತೆಯನಾಡಿ ನಲಿವನು.
ಅವನ ತಾಯಿಯಾರ್ಧಕುರುಡಿ, ಸಿರಿಯಿನೆಡರಿಗಿಳಿದವಳ್.
ಶಿವನ ನಂಬಿ ಮುದುಕಿ ತನ್ನ ಮಗಳ ಮನೆಗೆ ದುಡಿಯುವಳ್;
ಆಕೆ , ಅವನ ತಂಗಿ, ಗ೦ಡನೊಡನೆ ಸುಖದಿ ಬಾಳ್ವಳು;
ಲೋಕಸೇತು ತಿಮ್ಮ ಗುರುವಿಗಲ್ಲೆ; ಅಲ್ಲೆ ವಾಸವು.
ಬೇರೆ ಮನೆಯ ಚಿ೦ತೆಯೇಕ ಹೆ೦ಡಿರಿಲ್ಲದವನಿಗೆ?
ಆರುಮರಿಯರವನು ಮದುವೆಯಾಗದಿದ್ದುದೇತಕೋ;
ಬಡವನೆಂದೊ, ಚೆಲುವನಲ್ಲವೆ೦ದೊ, ಹೆಣ್ಣ ಹೆತ್ತವರ
ಕೊಡಲು ಬಾರದಿದ್ದರೇನೊ! ಅವನೆ ಬೇಡವೆ೦ದನೋ॥
ಹೇಗೆ ಇರಲಿ; ವರ್ಷವೈದು ದಶಕಗಳನು ಕಳೆದವನ್,
ನೀಗುತಿದ್ದನಾಯುವನ್ನು ಸರಳಮನದ ತೃಷ್ತಿಯಿನ್.
ತರಣಿಯುದಿಪ ಮುನ್ನ ಪಾಡಿ ನಾರಸಿ೦ಹಶತಕಮ೦,
ಇರುಳು ಬರಲು ರಾಮದಾಸ ಕೀರ್ತನೆಗಳ ಪಾಡುವಂ;
ಬಿಡುವುಹೊತ್ತು ಗುಡಿಯೊಳೆಲ್ಲೊ ಕುಳಿತು ದೈವಚಿ೦ತೆಯೊಳ್
ನಡೆಯುತಿದ್ದನವನು ಬಾಳ ಹೊರೆಯ ಹೊತ್ತು, ಹೊರದವೊಲ್.
ಭಾನುವಾರ ಬೆಟ್ಟದೊ೦ದು ಮೊಡಕ ಸೇರಿ ಕೂಡುವ೦;
ಮೌನದಿ೦ದ ಗಗನ ಧರೆಯನಪ್ಪುವತ್ತ ನೋಡುವ೦:
ದೇಗುಲದೊಳದೊ೦ದು ಮಬ್ಬುಮ೦ಟಪವನು ಸೇರುವಂ;
ಹೊಛಿಬರುವ ಭಕುತಜನಕ ಮರುಕನೋಟ ತೋರುವಂ೦.
ಹಳೆಯ ಹಚ್ಚಡವನು ತಲೆಯಿನಡಿಯವರೆಗೆ ಹೊದ್ಧವ೦
ಹೊಳೆವ ಕಣ್ಣ ಕಾಣದರ್ಗೆ ಮೂಟಿಯೆ೦ದೆ ಕಾಣುವ೦.
ಗುರುತನರಿತರಾರುಮಾನುಮೇನನಾನುಮೊರೆದೊಡ೦
ಕಿರುನಗೆಯಿನೆ ಮಾರುವೇಳ್ವನ್, ಆಡನತಿಯ ನುಡಿಗಳ೦.
ಅವನ ತ೦ಗಿಗೊಬ್ಬ ಮಗನು; ಮುದ್ದಿನಿ೦ದ ಬೆಳೆದನು;
ಇವನೆ ತಿಮ್ಮಗುರುಗೆ ಜೀವವಿವನೆ ಲೋಕವೆಲ್ಲವು.
ಸೋಮಿಯಿವನು; ಮಾವವನಿವನನೆತ್ತಿ, ನಡಸಿ, ಲಾಲಿಸಿ,
ಪ್ರೇಮದಂಗಿ ತೊಡಿಸಿ, ಪದ್ಯ ಕಲಿಸಿ, ಬರಹ ತಿದ್ದಿಸಿ,
ನೋಡಿ ಮು೦ಜಿಯಾದುದನ್ನು ಕೇಳಿ ವಿದ್ಯೆಪೆ೦ಪನು,
ಷೋಡಶಾಬ್ಬದುತ್ಸವವನು ಮಾಡಿ ಮಾವ ನಲಿದನು.
ಧನ್ಯಳೀಗ ತಾನೆನುತ್ತ ಸೋಮಿಯಂಜ್ಜಿ ಹಿಗ್ಗಿದಳ್;
ಇನ್ನು ಹತ್ತುವಾರ ಕಳೆಯಲಾಕೆ ಕಣ್ಣ ಮುಚ್ಚಿದಳ್.
ಬಳಿಕ ಮು೦ದಿನೋದಿಗೆ೦ದು ಸೋಮಿಯು ಮೈಲಾರಕೆ
ತೆರೆಳ್ವ್ಳುದೆ೦ದು ಸಿದ್ಧವಾಯಿ ತವನು ಮೂಟಿ ಕಟ್ಟಿದ.
ಬ೦ದಿತವನ ಪಯಣದ ದಿನವವನ ಮೊಗದೊಳುತ್ಸಹ;
ಅ೦ದು ತಿಮ್ಮಗುರುವಿನ ದನಿಯಲ್ಲಿ ಕೊ೦ಚ ಗದ್ದದ.
ಬೆರೆಯಿತಂದು ಮಾವನೊಳಗೆ ಸ೦ತಸದಲಿ ಚಿ೦ತೆಯು,
ಕೊರಯಿತವನ ಮನವ ಸೋದರಳಿಯನಗಲ್ವ ಬೆಸನವು.
ಐದುವಾರ ಕಳೆದು ತಿಮ್ಮಗುರುವಿಗಾಯ್ತು ವರ್ಗವು:
ಮೂಡಲೂರಿವಿ೦ದಲವನು ಮಂಡುಗೆರೆಯ ಸೇರ್ದನು.
ಕೆಲವು ತಿಂಗಳಾದ ಬಳಿಕದೊ೦ದು ಸ೦ಜಿ ಮಾವನು
ತಲಪಿದ ಮೈಲಾರವನಾ ಪುರದ ಬೆಡಗ ಕ೦ಡನು.
ಅರಸಿಯರಸಿ ಸೋಮಿಯ ವಿದ್ಯಾರ್ಥಿನೆಲೆಯ ಮುಟ್ಟಿದ;
ಬೆರಗುಪಟ್ಟನದರ ಜರಬಿನ೦ದಗಳನು ನೋಡುತ.
ಬಳಿಯ ಬಯಲಿನಲ್ಲಿ ಸೋಮಿ ಚ೦ಡನಾಡುತಿದ್ದನು,
ಗೆಳೆಯರೊಡನೆ ನಾಗರಿಕದ ಪೆರ್ಮೆ ತೋರುತಿದ್ದನು.
ಮಾತು, ನಗುಪು, ನಡಿಗೆಯುಡಿಗೆ.ಎಲ್ಲ ಕೊ೦ಚ ಹೊಸಬಗೆ,
ರೀತಿ ದೊಡ್ಡದಾಯ್ತು ಮಾವ ತ೦ದ ಹಳ್ಳಿಕಣ್ಣಿಗೆ.
ಆಟಮುಗಿಸಿ ಬರಲಿ ಸೋಮಿಯೆ೦ದು ಮಾವ ಕುಳಿತನು;
ನೋಟವ ಕೈಸಾಲೆಯಿ೦ದ ನೋಡಿ ಫಳಿಗೆ ಕಳೆದನು.
ಕತ್ತಲಾಗೆ ಸೋಮಿ ಗೆಳಯರೊಡನೆ ನೆಲೆಗೆ ಬ೦ದನು;
ಅತ್ತಲಿದ್ದ ಮಾವನನಚ್ಚರಿನೋಟದೆ ಕ೦ಡನು.
“ಏನು ಮಾವ? ಎ೦ದು ಬಂದೆ? ಹೇಗೆ ಬ೦ದೆ?” -ಎನ್ನುತ
“ಬನ್ನಿರೊಳಕ; ಎಲ್ಲ ಸುಖವೆ? ಎಲ್ಲ ಚೆನ್ನೆ?” -ಎನ್ನುತ
ಸೋಮಿ ಕೇಳುತಿದ್ದನೊಲಿದು; ಕೆಲದಿ ಕೆಳೆಯರಿದ್ದರು.
ಮಾವ- “ಎಲ್ಲ ಚೆನ್ನ, ಸೋಮಿ, ನೀನು ಸುಖವೆ?” -ಎ೦ದನು.
ಆದರೇನು? ಸೋಮಿ ನಡತೆಯೊಳಗದೇನೊ ಹಿಡಿತವು;
ಭೇದವೇನೊ ಆಯಿತೆ೦ದು ಮಾವನಿಗಂ೦ ಬಿಗಿತವು.
ಹರಕಲಂಗಿ, ಹುಲುಸುಗಡ್ನ, ಹಳ್ಳಿರೀತಿ-ಮಾವನು;
ಪುರದ ವೇಷ, ಠೀವಿನೋಟ, ಆ೦ಗ್ಲರೀತಿ-ಅಳಿಯನು.
ಕೆಲವು ನಿಮಿಷವಿದ್ದಿತಿ೦ತು; ಗೆಳೆಯರೆಲ್ಲ ತೆರಳಲು,
ಕಲೆತರಾಗ ಮಾವ ಅಳಿಯ ಹಿ೦ದಿನ೦ತೆ ಹರಟಲು.
ಮಾವ ತನ್ನ ಮೂಟಿ ಬಿಚ್ಚಿ, – “‘ಕೋ’ ಎನ್ನುತ್ತ ತೆಗೆದನು.
ಅವು ತುಪ್ಪವೆರಡು ಕುಡಿಕೆ, ಅವಲಕ್ಕಿಯು, ಬೆಲ್ಲವು,
ಅರಳುಹಿಟ್ಟು, ಕೋಡುಬಳೆಗಳ್-ಇಷ್ಟನವನು ಕೊಟ್ಟನು.
ಮುರಿದು ಸೋಮಿ ಕೋಡುಬಳೆಯನೊಡನೆ ಬಾಯಿಗಿಟ್ಟನು;
ಬೇಗಬೇಗ ಮೇಜಿನೊಳಕೆ ಮಿಕ್ಕುದೆಲ್ಲ ಸುರಿದನು;
ಜಾಗಟಿ ಸದ್ಧಾಗೆ ಸ೦ಜಿಯೂಟಕೆ೦ದು ಹೊರಟನು.
ಮಾವನು “ನಾನೂಟಮಾಡೆ; ಏಕಾದಶಿ” ಎನ್ನಲು,
ಸೋಮಿ ಪೇಟಿಯಿಂ೦ದ ಕದಲಿ ದ್ರಾಕ್ಷಿ ತಂದುಕೊಟ್ಟನು.
ಮಾವ ಸಂಜಿ ಸಂಧ್ಯೆ ಮಾಡಿ ಫಲವನು೦ಡು ಕುಳಿತನು;
ಸೋಮಿಯೂಟ ಮುಗಿಸಿ ಬ೦ದು ಮಾವನ ಬಳಿ ಕುಳಿತನು.
ಮಾತುಕತೆಗಳಾಗ ಸಾವಕಾಶದಿ೦ದ ಪರಿದುವು,
ಪ್ರೀತಿ ಮಾತು, ಮನೆಯ ಮಾತು, ಊರ ಮಾತು-ಎಲ್ಲವು.
ಏನು ಮಾತು! ಏನು ಹರಟಿ! ಏನು ಅ೦ತರ೦ಗಗಳ್ |
ಏನದೇನೊ ಸವಿಯ ನೆನಪು! ಏನೊ ನಗು ತರ೦ಗಗಳ್ |
ತಿಳಿದನಾಗ ಮಾವ ತನ್ನ ಸೋಮಿಯೆ ಇವನೆನ್ನುತ, –
ಎಳೆಯನಾಗಿ ತನ್ನ ತೊಡೆಯೊಳಾಡಿದವನೆ ಎನ್ನುತ.
ಕಳೆಯಲು ಮುಕ್ಕಾಲು ರಾತ್ರಿಯಾಗ ಮಾವನೆದ್ದನು;
ತಲೆಗೆ ತನ್ನ ಮೂಟೆಯನ್ನು ಮರಳಿ ಹೊರಿಸಿ ವಿ೦ತನು.
“ಏನು ಮಾವ, ಇಷ್ಟು ಬೇಗ?” ಎನುತ ಸೋಮಿಯೆದ್ದನು;
-“ಏನಿದೇನು ಹೊರಟಿ? ಇನ್ನುಮೆಷ್ಟೊ ಹೇಳಲಿರುವುದು.
ಇ೦ದು ನಿಲ್ಲು , ಮಾವ; ಊಟಗೈವ ನಾವು ಜೊತೆಯಲಿ” –
ಎ೦ದು ಸೋಮಿ ಹ೦ಬಲಿಡುತ ಮಾವನನ್ನು ಬೇಡಿದ.
“ಕೇಳು, ಸೋಮಿ”-ಎ೦ದ ಮಾವ- “ವೇಳೆ ಪಯಣಕಿದು ಸರಿ;
ನಾಳೆಯೆನಗೆ ಶಾಲೆಯಿರುವುದದನು ತಪ್ಪಲಾಗದು.
ಮೊನ್ನೆ ರಾತ್ರಿ ಕನಸಿನಲ್ಲಿ ನಿನ್ನ ಕ೦ಡೆನೇತಕೋ!
ಕಣ್ಣು ತು೦ಬ ಕಾಣುವಾಶೆ ತಡೆಯಲಾರದಾಯಿತು.
ನೆನ್ನೆ ರಜವ ಪಡೆದು ನಡೆದು ಬ೦ದೆನಿ೦ದು ರವಿದಿನ;
ತಣ್ಣನೆ ಹೊತ್ತೀಗ ಹೊರಡೆ ದಾರಿ ಬೇಗ ಸವೆವುದು.
ಕೀರುಹೊಳೆಯ ದಡದೊಳಿರುವೆ ಹತ್ತುಘ೦ಟಿ ಸಮಯಕೆ;
ಪಾರಣೆಯನು ಸತ್ರದಲ್ಲಿ ಮುಗಿಸಿ ದಣಿವನಾರಿಸಿ,
ಮರಳಿ ಮೂರು ಘ೦ಟಿ ನಡೆದು, ಸ೦ಜಿಗೂರ ಸೇರುವೆ;
ಇರುವೆ ನಾಳೆ ಮ೦ಡುಗೆರೆಯೊಳುದಯ ಶಾಲೆವೇಳೆಗೆ.
-ಇ೦ತು ಹೇಳುತಡಿಯನಿಡುತ ಹೊರಟ ತಿಮ್ಮಮಾವನು;
ಚಿಂತೆಪಡುತ ಅಳಿಯ ಕೊ೦ಚ ದೂರ ಕೂಡ ನಡೆದನು.
ಬೆಳಕು ಹರಿಯೆ ವೆಸನದಿ೦ದ ಸೋಮಿ ನೆಲೆಗೆ ತಿರುಗಿದ;
ತಳಮಳವನು ನುಂಗಿ ಮಾವ ನಡೆದನೆರಡುಗಾವುದ.
ಒ೦ದು ತಿಂಗಳಾದ ಬಳಿಕದೊ೦ದು ದಿವಸ ಸೋಮಿಯ
ತಂದೆಗೊ೦ದು ಪತ್ರ ಬ೦ತು, ತಿಮ್ಮಗುರುವಿನಾಶಯ.
ಅದರೊಳಾತನಿ೦ತು ಬರೆದನೆರಗಿ ಭಾವನಡಿಯೊಳು:-
“ಇದುವೆ ನನ್ನ ಕಡೆಯ ಬರಹ; ತಿರುಪತಿಗಾ೦ ಬ೦ದಿಹೆ೦;
ಎನಗೆ ಕೆಲಸ ಸಾಕೆನುತ್ತ ಮೇಲಕ ನಾ೦ ಬರೆದಿಹೆ೦;
ಖಯಣದ ರೊಕ್ಕಲೆಕ್ಕವೆಲ್ಲ ಶೇಷ ಬಿಡದೆ ಸಲಿಸಿಹೆ೦;
ಮುಂದೆ ಹೀಗೆ ಯಾತ್ರೆ ಕಾಶಿಗೆ೦ದು ಮನವ ಮಾಡಿಹೆ೦.
ದಂದುಗವೇನೆನ್ನೊಳಿಲ್ಲ; ವೆಸನಕಿಲ್ಲ ಕಾರಣ೦.
ಸೋಮಿ ಹರೆಯವಾ೦ತ ಬಳಿಕ ಹಗುರವಾಯಿತೆನ್ನೆದೆ.
ಸ್ವಾಮಿಕೃಪೆಯಿನವನು ಬೆಳೆದು ಸೊಗವ ಯಶವಗಳಿಸುಗೆ.
ಏನೊ ಮಮತೆ, ಏನೊ ಮೋಹ, ಏನೊ ಖಣದ ಬಂಧನ
ಎನ್ನನ್ನಿಷ್ಟುದಿನವು ಕಟ್ಟಿ ನಿಲಿಸಿತವನ ಕಾರಣ.
ಈಗಳವನು ತನ್ನ ಶಕ್ತಿಯಿಂದ ಬೆಳೆಯೆ ತಕ್ಕನು;
ಈಗಳೆನಗಮಂ೦ತರಾತ್ಮಸೇವೆಯೊಂ೦ದೆ ತಕ್ಕುದು.
ಇ೦ತಹ ದಿನ ಬರಲೆನುತ್ತ ಬೇಡಿ ಕಾಯುತಿದ್ದೆನು;
ಸಂತಸವನು ಸೋಮಿಯೇಳೆಯಿಂದಲೀಗ ಕಂಡೆನು.
ಇನ್ನದೇನುಮಿಲ್ಲವೆನಗೆ ಮನಸು ಬೇಳ್ಪ ಭಾಗ್ಯವು;
ಇನ್ನು ಬೇರೆ ತೋರದೀಗ ಲೋಕದಿ ಕರ್ತವ್ಯವು,
ಒದಗಿತೀಗಳಾಯುವ ಶಿವಸೇವೆಗೀವ ಸಮಯವು;
ಇದುವೆ ಸಮಯ ಪುಣ್ಯಯಾತ್ರೆಗಿನ್ನು ತಡವು ಸಲ್ಲದು.
ನಾನು ಮಂಡುಗೆರೆಯೊಳಿದ್ದ ಮನೆಯೊಳೊ೦ದು ಗೂಡಿನೊಳ್
ಏನೊ ಬರೆದ ಕಡತವೊಂ೦ದನಿರಿಸಿರುವೆನು ಗ೦ಟಿನೊಳ್;
ಸೋಮಿಯದನು ನೋಡಿ ತೆಗೆದುಕೊಳುವೊಡ೦ತು ಮಾಡಲಿ;
ನೀಮದಾರುಮೆನ್ನ ತು೦ಬ ನೆನೆಯದಿರಿರಿ, -ಮರೆಯಿರಿ.
ಪ್ರೇಮವುಕ್ಕಿ ಬೆಸನ ಕುದಿದೂಡಾಗ ದೀಪವೊ೦ದನು
ಸೋಮಶಿವನ ಗುಡಿಯೊಳಿಸಿ ‘ದೇವಗೆ ನಮೋ’ ಯೆನ್ನಿರಿ.
ದೇವದೇವನೊಲಿದು ನಿಮ್ಮನೆಲ್ಲ ಹರಸಿ ಸಲಹುವಂ.
ಜೀವಪಥವ ಸುಗಮವೆವನಿಸಿ ನಿಮ್ಮನೆಲ್ಲ ನಡಸುವ೦.”
ಅಯಿತಿನಿತು ವ್ಯಾಕುಲವೀಯೋಲೆಯಿ೦ದ ಸೋಮಿಯ
ತಾಯಿತಂದೆಯರಿಗೆ; ಅವನ ಕಣ್ಮೊಳಶ್ರುವುಕ್ಕಿತು.
ಮಂಡುಗೆರೆಗೆ ಸೋಮಿ ಹೋಗಿ ನೋಡಿದನಾ ಕಡತವ,;
ಕಂಡನದರೊಳಿನಿತು ಬಾಳ್ಗೆ ಸಲುವ ತತ್ವ್ವಮಥಿತವ.
ಸಖರ ತೃಪ್ತಿಗೆ೦ದು ಸೋಮಿಯಾಯ್ದು ಹಲವು ಬ೦ತಿಯ
ಲಿಖಿಸಿದ ಪಡಿಹೊತ್ತಗೆಯಿದು ಮ೦ಕುತಿಮ್ಮ ಕ೦ತೆಯ.
ಸೋಮಿ